ಮುಂಬೈ: ಕೆಲವು ದಿನಗಳಿಂದ ಮುಂಬೈನ ಗಲ್ಲಿಒಂದರಲ್ಲಿ ಕಿರುತೆರೆ ನಟಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದಾರೆ ಎಂದು ಆರೋಪ ಕೇಳಿ  ಬರುತ್ತಿತ್ತು.  ಅನುಮಾನ ಬಂದ ಪೊಲೀಸರು ಮಾರುವೇಶದಲ್ಲಿ ಪರಿಶೀಲನೆಗೆ ತೆರಳಿದಾಗ ಸತ್ಯ ಹೊರ ಬಿದ್ದಿದೆ. 


COMMERCIAL BREAK
SCROLL TO CONTINUE READING

ಮಾರುವೇಶದಲ್ಲಿ ಹೋದ ಪೊಲೀಸರಿಗೆ ನಟಿ ರೆಡ್ ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಪರೀಶಿಲನೆ ವೇಳೆ ಕಿರುತೆರೆ ನಟಿ ಆರತಿ ಹರೀಶ್​ಚಂದ್ರ ಮಿತ್ತಲ್ ದಂಧೆ ನಡೆಸುತ್ತಿರುವುದು ಕಂಡುಬಂದೆ. ದಿಂಡೋಶಿ ಪೊಲೀಸರು ಗೋರೆಗಾಂವ್ ಪ್ರದೇಶದಲ್ಲಿ ನಡೆಸುತ್ತಿದ್ದ ಸೆಕ್ಸ್  ದಂಧೆಯನ್ನು ಭೇದಿಸಿದ್ದಾರೆ.


ಇದನ್ನೂ ಓದಿ: Soundarya Death Anniversary: ಅಗಲಿ 19 ವರ್ಷವಾದರೂ ಮಾಸದ ʻಸೌಂದರ್ಯʼ ನೆನಪು.. ಇಂದಿಗೂ ಜನಮಾನಸದಲ್ಲಿ ಅಜಾರಮರ!


ಗ್ರಾಹಕರಿಗೆ ಮಾಡೆಲ್‌ಗಳನ್ನು ಸರಬರಾಜು ಮಾಡುವ ಮೂಲಕ ಚಿತ್ರರಂಗದಲ್ಲಿ ವೇಶ್ಯಾವಾಟಿಕೆ ದಂಧೆಯನ್ನು ಮಾಡುತ್ತಿದ್ದರೆಂದು ಪೊಲೀಸರು ಹೇಳಿದ್ದಾರೆ. ಮಾರುವೇಷದಲ್ಲಿ ಹೋಗಿದ್ದರಿಂದ ಇಬ್ಬರು ಮಾಡೆಲ್‌ಗಳನ್ನು ಆ ಸ್ಥಳದಿಂದ ರಕ್ಷಿಸಿ ಈ ಪ್ರಕರಣ ಸಂಬಂಧ 30 ವರ್ಷದ ಕಾಸ್ಟಿಂಗ್ ಡೈರೆಕ್ಟರ್ ಆರತಿ ಮಿತ್ತಲ್ ಅವರನ್ನು ಬಂಧಿಸಲಾಗಿದೆ. 


ಮಿಡ್ ಡೇ ವರದಿಯ ಪ್ರಕಾರ, ಇನ್​ಸ್ಪೆಕ್ಟರ್ ಮನೋಜ್ ಸುತಾರ್ ಅವರಿಗೆ ಈ ವೇಶ್ಯಾವಾಟಿಕೆಯ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಮಾರುವೇಷದಲ್ಲಿ ಹೋಗಿ ಆರೋಪಿ  ಆರತಿ ಬಳಿ ತಾವು ಗ್ರಾಹಕರು ಎಂದು ಹೇಳಿಕೊಂಡಿದ್ದಾರೆ. ಮಾರುವೇಷದ ಇನ್​ಸ್ಪೆಕ್ಟರ್, ಇಬ್ಬರು ಹುಡುಗಿಯರು ಬೇಕು ಮತ್ತು ಅವರನ್ನು ಹೋಟೆಲ್​ಗೆ ಕಳುಹಿಸುವಂತೆ  ಕೇಳಿದ್ದರು.  ಆಕೆಯೇ ಸುತಾರ್ ಗೋರೆಗಾಂವ್‌ನಲ್ಲಿ ಎರಡು ರೂಂಗಳನ್ನು ಬುಕ್‌ ಮಾಡಿ , ಹೋಟೆಲ್ ರೂಂ ಒಳಗೆ ತೆರಳುವುದಕ್ಕೂ ಮುನ್ನ ತನ್ನ ಗ್ರಾಹಕರಿಗೆ ಆರತಿ ಕಾಂಡೋಂಮ್ ನೀಡಿದ್ದರು. ಹಾಗೂ ಇಬ್ಬರು ಗ್ರಾಹಕರನ್ನು ಕಳುಸುವ ಎಲ್ಲ ಸಾಕ್ಷಿಗಳನ್ನು ಪೋಲಿಸರು  ಸೀಕ್ರೇಟ್ ಕ್ಯಾಮರದಲ್ಲಿ ಸೆರೆ ಹಿಡಿಯುತ್ತಿದ್ದರು.  


ಇದನ್ನೂ ಓದಿ: ಮಾವು ಬೇವು ಪೋಷಿಸಿದ ನೀನಾಸಂ ಸಂದೀಪ್


ದಂಧೆಯಲ್ಲಿ ಭಾಗಿಯಾಗುವ ಮಾಡೆಲ್​ಗೆ 15 ಸಾವಿರ ರೂಪಾಯಿ ಹಣ ನೀಡಿ ಉಳಿದ  ಹಣ  ಆರತಿ ಪಾಲಾಗುತ್ತಿತ್ತು. ಸದ್ಯ ಪ್ರಕರಣ ಸಂಬಂಧ ನಟಿ ಮಿತ್ತಲ್ ವಿರುದ್ಧ ಐಪಿಸಿಯ ಸೆಕ್ಷನ್ 370 ಮತ್ತು ಹುಡುಗಿಯರ ಕಳ್ಳಸಾಗಣೆಗಾಗಿ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 


ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಯುನಿಟ್ 11 ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಸ್ಟಿಂಗ್ ಡೈರೆಕ್ಟರ್​ ಆಗಿ ಕೆಲಸ ಮಾಡುತ್ತಿದ್ದ ನಟಿ ಆರತಿ ‘ಅಪ್ನಾಪನ್’ ಸೇರಿ ಕೆಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.    https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.